ಮನ ಬಂದಂತೆ ಗೀಚುವುದೇ ನನ್ನ ಹವ್ಯಾಸ. ಚಿಕ್ಕಂದಿನಿಂದಲೂ ಬರೆಯುವ ಹವ್ಯಾಸವಿದ್ದರೂ ಯಾರಿಂದಲೂ ಪ್ರೋತ್ಸಾಹ ಸಿಗದೇ ಬರೆದ ಕಥೆಗಳೆಲ್ಲ ಕಸದ ಡಬ್ಬಿ ಸೇರುತ್ತಿದ್ದವು. ಆದರೂ ಬರೆಯುವ ಹುಮ್ಮಸ್ಸು ಸ್ವಲ್ಪವೂ ಕಡಿಮೆಯಾಗಲಿಲ್ಲ. ಒಂದು ಕಥೆ ಮನಸ್ಸಿಗೆ ಹೊಳೆದಾಗ ಅದನ್ನು ಬರೆದ ಮೇಲೆ ಅದೇನೋ ಖುಷಿ. ಯಾರಾದರೂ ಓದಲಿ, ಬಿಡಲಿ ಬರೆಯುವುದನ್ನು ಬಿಡುವುದಿಲ್ಲ. ಕಥೆ ಬರೆಯುವಾಗ ಕಥೆಯ ಮುಖ್ಯ ಪಾತ್ರ ನಾನೇ ಆಗಿರುವಂತೆ ಬರೆಯುವುದು ನನಗೆ ಬಹಳ ಇಷ್ಟ. ಅದು ಗಂಡಾಗಲಿ ಹೆಣ್ಣಾಗಲಿ. ಈ ಬ್ಲಾಗ್ ನಲ್ಲಿ ಕಥೆ, ಲೇಖನಗಳನ್ನು ಬರೆಯಲು ಶುರು ಮಾಡಿದ ಮೇಲೆ ಓದುಗರೂ ಸಿಕ್ಕಿದ್ದಾರೆ. ಕೆಲವರು ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಬೆನ್ನು ತಟ್ಟಿ ಇನ್ನಷ್ಟು ಬರೆಯುವಂತೆ ಮಾಡಿದ್ದಾರೆ. ಅವರಿಗೆಲ್ಲ ನನ್ನ ಅನಂತ ಧನ್ಯವಾದಗಳು.
ನನ್ನ ಎಲ್ಲ ಕಥೆಗಳು ಹಾಗೂ ಲೇಖನಗಳ ಹಕ್ಕನ್ನು ಕಾಯ್ದಿರಿಸಲಾಗಿದೆ. ನಾನು ಬರೆದ ಕಥೆಗಳೆಲ್ಲವೂ ಕೇವಲ ಕಾಲ್ಪನಿಕ. ಯಾರಿಗಾದರೂ ಹೋಲಿಕೆ ಕಂಡು ಬಂದಲ್ಲಿ ಅದು ತೀರಾ ಆಕಸ್ಮಿಕ. ನಾನು ಸೆರೆ ಹಿಡಿದ ವಿಶಿಷ್ಟ ಚಿತ್ರಗಳು ಚಿತ್ರ ವೈಶಿಷ್ಟ್ಯದಲ್ಲಿವೆ.
ನಾನು ಇದುವರೆಗೂ ಬರೆದ ಕಥೆಗಳಲ್ಲಿ ಕೆಲವನ್ನು ಸೇರಿಸಿ ಇ ಪುಸ್ತಕವನ್ನಾಗಿ ಮಾಡಿ ಪ್ರಕಟಿಸಿದ್ದೇನೆ. ಅದೇ ನನ್ನ ಮೊದಲ ಕಥಾ ಸಂಕಲನ, ಕಥಾಗುಚ್ಛ. ನಿಮಗೆಲ್ಲ ಇಷ್ಟವಾಗಬಹುದೆಂದು ಭಾವಿಸುತ್ತೇನೆ. ಇದು ನನ್ನ ಇನ್ನೊಂದು ಜಾಲತಾಣದಲ್ಲಿ ಉಚಿತವಾಗಿ ಲಭ್ಯವಿದೆ.ಓದುಗರು ದಯವಿಟ್ಟು ಇ ಪುಸ್ತಕವನ್ನು ಡೌನ್ ಲೋಡ್ ಮಾಡಿ ಓದಿ ನನ್ನನ್ನು ಪ್ರೋತ್ಸಾಹಿಸಬೇಕಾಗಿ ನಮ್ರ ವಿನಂತಿ.
ಜಾಲತಾಣದ ವಿಳಾಸ :